Thursday, November 27, 2014

SUB-DISTRICT PRIZE WINNER

ಕುಂಬಳೆ  ಉಪಜಿಲ್ಲಾ ಮಟ್ಟದ ''ವಿದ್ಯಾರಂಗ ಸಾಹಿತ್ಯ ವೇದಿಕೆ''ಯ  ಕಿರಿಯ ಪ್ರಾಥಮಿಕ ವಿಭಾಗದ ಕಥಾರಚನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ 4ನೇ ತರಗತಿ ವಿದ್ಯಾರ್ಥಿನಿ  ದೀಕ್ಷಾ. ಕೆ ಯನ್ನು  ಅಭಿನಂದಿಸಲಾಯಿತು 

Friday, November 14, 2014

ಸರ್ವ ಶಿಕ್ಷಾ ಅಭಿಯಾನ   ನಿರ್ದೇಶನ ಪ್ರಕಾರ ಮಕ್ಕಳ ದಿನದಂದು  " ರಕ್ಷಕರ ಸಮ್ಮೇಳನ"   ಕಾರ್ಯ ಕ್ರಮ ನಡೆಯಿತು . ವಾರ್ಡು ಸದಸ್ಯರಾದ ಶ್ರೀ ಐತ್ತಪ್ಪ ಕುಲಾಲ್  ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಗೋವಿಂದ ನಾಯ್ಕ ಮಾಸ್ಟರ್  ತರಗತಿ ನಡೆಸಿದರು .ಮುಖ್ಯ ಶಿಕ್ಷಕಿ  ಶಶಿಕಲ ಟೀಚರ್ ಸ್ವಾಗತಿಸಿದರು . ಪ್ರಸನ್ನ ಕುಮಾರಿ ಟೀಚರ್ ವಂದಿಸಿದರು .  ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು .
 



ಮಕ್ಕಳ ದಿನ ಆಚರಣೆ
 ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ "ಸಾಕ್ಷರ 2014" ವಿಶೇಷ ಬಾಲಸಭೆ  ಜರಗಿತು. ತರಗತಿಯ ರಿತೇಶ್  ಸಭಾಧ್ಯಕ್ಷತೆ ವಹಿಸಿದನು. ಪ್ರಜ್ಞಾ, ಸಂಧ್ಯಾ ಮತ್ತು ದೀಪಕ್ ಪ್ರಾರ್ಥನೆ  ಹಾಡಿದರು . ಯತೀಶ್ ಸ್ವಾಗತಿಸಿ ,ಮೌನೀಶ್  ಧನ್ಯವಾದವಿತ್ತನು .ಫಾತಿಮತ್ ಫಾಸಿಲ   ಕಾರ್ಯ ಕ್ರಮ ನಿರೂಪಿಸಿದಳು . ಶಿಕ್ಷಕರ ಯೋಗ್ಯ ಮಾರ್ಗದರ್ಶನದಲ್ಲಿ  ಮಕ್ಕಳು ವಿವಿಧ ಕಾರ್ಯ ಕ್ರಮ  ನಡೆಸಿ ಕೊಟ್ಟರು .  



Saturday, November 1, 2014

ಬಾಲಸಭೆ  29/10/2014 ಬುಧವಾರ
 ಮಕ್ಕಳ ಬಾಲಸಭೆಯು  4ನೇ ತರಗತಿ ವಿದ್ಯಾರ್ಥಿ ರೋಭಿತ್ ನ ಅಧ್ಯಕ್ಷತೆಯಲ್ಲಿ ಜರಗಿತು. ಮಕ್ಕಳ ಪ್ರತಿಭಾ ಪ್ರದರ್ಶನದ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ ಮಕ್ಕಳು  ಉತ್ಸಾಹದಿಂದ ಪಾಲ್ಗೊಂಡರು . ನವ್ಯ,ರವಿಶಂಕರ,ಮತ್ತು ಚೈತ್ರ ಪ್ರಾರ್ಥನೆ ಹಾಡಿದರು . ಲಿಖಿತ್ ಕುಮಾರ್ ಸ್ವಾಗತಿಸಿ, ವಿಕೇಶ್ ಡಿಸೋಜ ವಂದಿಸಿದನು . ಪ್ರಸನ್ನ ಟೀಚರ್ ನ  ಮಾರ್ಗದರ್ಶನದಲ್ಲಿ ಯತೀಶ್ ಕಾರ್ಯಕ್ರಮ ನಿರ್ವಹಿಸಿದನು