Monday, September 29, 2014

ದಿನಾಂಕ 02/10/2014ರಂದು ನಮ್ಮ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ದಿನಾಂಕ 04/10/2014 ರಂದು ಶಾರದಾ ಪೂಜೆ ನಡೆಯಲಿದೆ . ತಮಗೆಲ್ಲರಿಗೂ  ಆದರದ ಸ್ವಾಗತ 



  ರಘುಪತಿ  ರಾಘವ  ರಾಜಾರಾಂ  ಪತೀತ ಪಾವನ ಸೀತಾರಾಮ್ ....

ದಸರಾ ನಾಡ ಹಬ್ಬ ಆಚರಣೆ 
ಮಕ್ಕಳಿಗೆವಿವಿಧ  ಸ್ಪರ್ಧೆಗಳನ್ನು  ನಡೆಸಲಾಯಿತು











ನಮ್ಮ ಶಾಲಾ ತರಕಾರಿ ತೋಟದಿಂದ  ಸಿಕ್ಕಿದ  ತರಕಾರಿಗಳು 

ಇದಕೆಲ್ಲ ನಮ್ಮ ಶಾಲೆಯ  ಪ್ರಸನ್ನ ಟೀಚರ್ ಅವರ ಪ್ರೋತ್ಸಾಹವೇ ಕಾರಣ .............................  

Thursday, September 25, 2014

CPTA ಸಭೆ  ದಿನಾಂಕ 25/09/2014 ರಂದು  ಅಪರಾಹ್ನ  3 ಗಂಟೆಗೆ ಎಲ್ಲ ತರಗತಿ ಗಳಲ್ಲಿ ಜರಗಿತು . ಮಕ್ಕಳ ಕಲಿಕಾ ಚಟುವಟಿಕೆಗಳ  ಹಾಗೂ  ಒಂದನೇ  ಹಂತದ  ಮೌಲ್ಯ ಮಾಪನದ ಕುರಿತು ವಿಚಾರವಿನಿಮಯ ನಡೆಸಲಾಯಿತು . ರಕ್ಷಕರು ಮಕ್ಕಳ ಬಾಲಸಭೆ , ಘಟಕಪರೀಕ್ಷೆ , ಸಾಕ್ಷರ ಚಟುವಟಿಕೆಯ  ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು . ಮಕ್ಕಳಿಗೆ ಪ್ರತಿದಿನವೂ    ಮನೆ ಕೆಲಸವನ್ನು ನೀಡುವಂತೆ  ಸೂಚಿಸಿದರು .  
ಬಾಲಸಭೆ ಮತ್ತು ಮಕ್ಕಳ ಹಸ್ತಪತ್ರಿಕೆ  ಬಿಡುಗಡೆ ದಿನಾಂಕ 25/09/2014 ರಂದು  ನಡೆಯಿತು . ಸಭೆಯ ಅಧ್ಯಕ್ಷತೆಯನ್ನು  ಶಾಲಾ ಶಿಕ್ಷಕಿ  ಪ್ರಸನ್ನಕುಮಾರಿ ವಹಿಸಿದರು . ಹಸ್ತಪತ್ರಿಕೆ "ಜ್ಞಾನಜ್ಯೋತಿ " ಯನ್ನು  MPTA ಅಧ್ಯಕ್ಷೆ  ಶ್ರೀಮತಿ ಭಾಗೀರಥಿ 
ಯವರು ಬಿಡುಗಡೆಗೊಳಿಸಿದರು 


 ಇಬ್ಬರೂ ಸೇರಿ  ಎಲ್ಲರನ್ನು ನಗಿಸಲು ಪ್ರಯತ್ನ ................. 
 ನಮ್ಮದೇಶ ಭಾರತ ......................  ಹೇಳಿರೆಲ್ಲ ಹಿಗ್ಗುತ ..


ಮಕ್ಕಳನ್ನು  ಅಪಾಯಕ್ಕೆ  ಎಡೆಮಾಡುವ  ತೆರೆದ  ಕೊಳವೆಬಾವಿ  .................................. 
 ಪರಿಸರಮಾಲಿನ್ಯ ದ  ಬಗ್ಗೆ  ಕಿರುನಾಟಕ ...................

Saturday, September 13, 2014

ಓಣಂ ಹಬ್ಬದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಂದ  ಹೂವಿನ ರಂಗವಲ್ಲಿ ಹಾಕಿ , ಹಬ್ಬದ  ಪ್ರಯುಕ್ತ  ಔತಣ ವನ್ನು   ಹಮ್ಮಿಕೊಳ್ಳಲಾಯಿತು ಜೊತೆ ಯಲ್ಲಿ ಟಿವಿ ವೀಕ್ಷಣೆ ............... 




















ನಮ್ಮ ಹೊವಿನರಂಗವಲ್ಲಿ  ರೆಡಿ .......................

 ಭಾರತದ  ಪ್ರದಾನಮಂತ್ರಿ  ಶ್ರೀ  ನರೇಂದ್ರ ಮೋದಿ  ಯವರ  ಮಕ್ಕಳೊಂದಿಗೆ ಇರುವ  ಸಂವಾದದ ಕಾರ್ಯಕ್ರಮ ವನ್ನು ವೀಕ್ಷಿಸಲು  ನಾವು  ಶಾಲೆಯ ಸಂಚಾಲಕರ ಮನೆಗೆ .................................